![christmas songs lyrics](https://www.worldtamilchristians.com/wp-content/uploads/2022/12/christtmas-songs-lyrics-150x150.png)
ಜುದೇಯದ ನಾಡಿನ – Judea Naadu
ಜುದೇಯದ ನಾಡಿನ – Judea Naadu
ಜುದೇಯದ ನಾಡಿನ ಬೆತ್ಲೆಹೇಮ್ ಗೋದಲಲಿ
ರಾಜಾಧಿರಾಜರು ಹುಟ್ಟಿದರು
ಮಾತೆಯ ಮಡಿಲಲ್ಲಿ ಜೋಸೆಫರ ಕಾವಲಲ್ಲಿ ಯಹೂದ್ಯರ ಅರಸರು ಹುಟ್ಟಿದರು
ನನ್ನನ್ನು ರಕ್ಷಿಸಲು ನನಗಾಗಿ ಪ್ರಾಣ ಕೊಡಲು
ಜೀವಂತ ರೊಟ್ಟಿಯಾಗಿ ನನ್ನ ಜೊತೆ ವಾಸಿಸಲು
ಭೂವಿಗೆ ತಂದನು ಸಡಗರ ಸಂಭ್ರಮವ
ಮನುಜಗೆ ಲಭಿಸಿತು ಸ್ವರ್ಗ ಸೌಭಾಗ್ಯವ
ಮಿನುಗುತಾರೆ ತೋರಿತು ರಕ್ಷಕನ ತಾಣವ
ದೂತವೃಂದ ಮೊಳಗಿತು ಶಾಂತಿ ಪ್ರೀತಿ ಗಾನವ
ಬಾಲಯೇಸುವೇ ಭೂವಿಪಾಲನೆ
ಸಂತೋಷವು ಸಮೃದ್ಧಿಯು ನಿನ್ನಿಂದಲೇ
ನವ ಜೀವನ ನವಚೇತನ
ನವ ಸಂತಸ ನವಬರವಸೆ ನಿನ್ನಿಂದಲೇ
ಹೃದಯವೆಂಬ ಗೋದಲಿಯೊಳು ಯೇಸು ಬಂದು ನೆಲೆಸಿಹರು
ಪ್ರೀತಿಯ ಸಂಕೇತವಾಗಿ ತನ್ನನ್ನೆ ನೀಡಿಹರು
ದೀನತೆಯಿಂದ ಪರಿಶುದ್ಧತೆಯಿಂದ
ನಮ್ಮನ್ನು ಯೇಸುವಿಗೆ ಅರ್ಪಿಸಿ ಕೊಡುವ
ಬನ್ನಿರಿ ಎಲ್ಲಾ ಒಮ್ಮನದಿಂದ
ಆನಂದದಿ ಕ್ರಿಸ್ತ ಜಯಂತಿ ಕೊಂಡಾಡುವ