![christian songs lyrics](https://www.worldtamilchristians.com/wp-content/uploads/2024/06/christian-songs-lyrics-267x150.png)
ಶ್ರೀ ಯೇಸು ನಾಮ ಅತಿಶಯ ನಾಮ – Shree Yesu Naama
ಶ್ರೀ ಯೇಸು ನಾಮ ಅತಿಶಯ ನಾಮ – Shree Yesu Naama
ಶ್ರೀ ಯೇಸು ನಾಮ ಅತಿಶಯ ನಾಮ
ಪಾಪಿಗೆ ಇಂಪಾದ ನಾಮ
1. ಪಾಪ ಪರಿಹಾರಕ್ಕಾಗಿ ಪಾಪಿಗಳ ಹುಡುಕಿ
ಧರಣಿಗೆ ಬಂದ ನಾಮ
ಪಾಪ ರಹಿತ ಜೀವಿತದಿ ಮಾದರಿಯ ತೋರಿಸಿದ
ಪರಿಶುದ್ಧ ಪುಣ್ಯ ನಾಮ – ಹಲ್ಲೆಲೂಯ
2. ಎಲ್ಲಾ ನಾಮದಲ್ಲಿಯೂ ಮೇಲಾದ ನಾಮ
ಯೇಸುವಿನ ದಿವ್ಯ ನಾಮ
ಸರ್ವಜನರೆಲ್ಲಾ ಅಡ್ಡಬಿದ್ದು ಸ್ತೋತ್ರ ಮಾಡಿ
ಹರ್ಷದಿಂದ ಹಾಡುವ ನಾಮ – ಹಲ್ಲೆಲೂಯ
3. ಲೆಕ್ಕವಿಲ್ಲದಷ್ಟು ಪಾಪ ನನ್ನಿಂದ ತೆಗೆಯಲು
ನನಗಾಗಿ ಬಂದ ನಾಮ
ಅನ್ಯನೆಂದು ತಳ್ಳದೆನ್ನ ಧನ್ಯನಾಗಿ ಮಾಡಲು ಬಂದ
ಉನ್ನತನ ಪುಣ್ಯ ನಾಮ
4. ಭೂತ ಬಾಧಿತರಿಗೆ ನಾನಾ ರೋಗಿಗಳಿಗೆ
ಸ್ವಸ್ಥ ಮಾಡುವಂಥ ನಾಮ
ಕುರುಡರಿಗೂ ಕುಂಟರಿಗೂ ಕುಷ್ಟರೋಗಿಗಳಿಗೆಲ್ಲಾ
ಬಿಡುಗಡೆ ಕೊಡುವ ನಾಮ